ಕನ್ನಡ ಭಾಷೆ - "ಜೀವನದ ಮಾತುಗಳು".mp4

ಕನ್ನಡ ಭಾಷೆ - "ಜೀವನದ ಮಾತುಗಳು".mp4

Kannada Language - "Words of Life".mp4 //1 ಕೊರಿಂಥಿಯರಿಗೆ 13 - ಪರಮ ಪ್ರೀತಿ1ಸುರನರರ ನುಡಿಗಳ ನಾನಾಡಬಲ್ಲೆನ...
32 Minuten
Podcast
Podcaster
INDIAN MOST POPULAR LANGUAGES BY NUMBER(FROM No.1 TO No.12) / ===“Good News for All People”, "Words of Light", and "Songs og Life" // संख्या से सर्वाधिक बोली जाने वाली भाषाओं (१-१२) भारत में - ==="सभी लोगों के लिए अच्छी खबर", "प्रकाश के शब्द", और "जीव...

Beschreibung

vor 9 Jahren

Kannada Language - "Words of Life".mp4 //
1 ಕೊರಿಂಥಿಯರಿಗೆ 13 - ಪರಮ ಪ್ರೀತಿ


1ಸುರನರರ ನುಡಿಗಳ ನಾನಾಡಬಲ್ಲೆನಾದರೂ. ಪರಮ ಪ್ರೀತಿಯೊಂದೆನಗಿಲ್ಲದಿರಲು. ನಾ
ಕೇವಲ ಗಣಗಣಿಸುವ ಘಂಟೆ, ಝಣಝಣಿಸುವ ಜಾಗಟೆ.


2ಪ್ರವಾದನೆಯ ವರವೆನಗಿರಬಹುದು. ಇರಬಹುದು ನಿಗೂಢ ರಹಸ್ಯಗಳರಿವು  ಎಲ್ಲದರ
ಪರಿಜ್ಞಾನ, ಪರ್ವತವನೇ ಕದಲಿಪ ವಿಶ್ವಾಸ ಪ್ರೀತಿಯೊಂದಿಲ್ಲದಿರೆ ನಾ ಶೂನ್ಯಸಮಾನ.


3ನನಗಿರುವುದೆಲ್ಲವನು ನಾ ದಾನಮಾಡೆ  ದೇಹವನೆ ಸಜೀವ ದಹಿಸಲು ನೀಡೆ
ನಾನಾಗಿರೆ ಪರಮ ಪ್ರೀತಿ ವಿಹೀನ. ಏನದು ಜೀವನ, ನನಗೇನದು ಪ್ರಯೋಜನ?


4-6ಸಹನೆ ಸೈರಣೆ, ದಯೆದಾಕ್ಷಿಣ್ಯ ಪ್ರೀತಿಯಲ್ಲಿವೆ. ಎಡೆಯಿಲ್ಲ ಅದರಲಿ ಗರ್ವಕೆ,
ಮರ್ಮಕೆ, ಮೆರೆತಕೆ, ಮತ್ಸರಕೆ, ಸಿಡುಕಿಗೆ, ಸೊಕ್ಕಿಗೆ, ಸ್ವಾರ್ಥಕೆ,
ಸೇಡುಗಳೆಣಿಕೆಗೆ. ನಲಿಯದು ಪ್ರೀತಿ ಅನೀತಿಯಲಿ. ನಲಿಯದಿರದದು ಸತ್ಯದ ಜಯದಲಿ.


7ನಂಬುವುದೆಲ್ಲವನು, ನಿರೀಕ್ಷಿಸುವುದೆಲ್ಲವನು, ಸಹಿಸಿಕೊಳ್ಳುವುದು ಸಮಸ್ತವನು.
ಪ್ರೀತಿಯದೆಂದೂ ಅರಿಯದು ಸೋಲನು.


8-9ಅಳಿದುಹೋಗುವುವು ಭವಿಷ್ಯವಾಣಿ. ಗತಿಸಿಹೋಗುವುದು ಬಹುಭಾಷಾ‍ ಶಕ್ತಿ.
ಹೋಗುವುವು ನಶಿಸಿ ಜ್ಞಾನ, ಬುದ್ಧಿ. ಆದರೆ ಅಮರವಾದುದು ಪರಮ ಪ್ರೀತಿ.


10ಅಪೂರ್ವವಾದುದು ನಮ್ಮಾ ಅರಿವೆಲ್ಲ. ಪೂರ್ಣವಾದುದಲ್ಲ ಪ್ರವಾದನವದೆಲ್ಲ;
ಪರಿಪೂರ್ಣತೆ ಪ್ರಾಪ್ತವಾಗಲು. ಇಲ್ಲವಾಗುವುದು ಅಪೂರ್ಣತೆಯೆಲ್ಲ.


11ಬಾಲಕ ನಾನಾಗಿರೆ ಆಡಿದೆ, ಮಾತಾಡಿದೆ, ಚಿಂತಿಸಿದೆ, ಸುಖದುಃಖಗಳ ಸವಿದೆ
ಬಾಲಕನಂತೆ. ಬಲಿತು ಬೆಳೆದು ಮನುಜನಾದುದೆ. ಬಾಲಿಶವಾದುದೆಲ್ಲವನು ಬದಿಗೊತ್ತಿದೆ.


12ನಾವೀಗ ಕಾಂಬುದು ದರ್ಪಣದ ಬಿಂಬವನು ಮುಸುಕಾಗಿ. ತರುವಾಯ ಕಾಂಬೆವು ದೇವರನು
ಮುಖಾಮುಖಿಯಾಗಿ.  ಈಗಿರುವುದೆನ್ನ ಅರಿವು ತುಂಡುತುಂಡಾಗಿ. ನಂತರ
ದೇವನೆನ್ನ ಅರಿತಂತೆ ಈ ಮೂರಲಿ ನಾನರಿವೆನು ಅಖಂಡವಾಗಿ.


13ನಿಲ್ಲುವುವು ನಂಬಿಕೆ, ನಿರೀಕ್ಷೆ, ಪ್ರೀತಿ ನೆಲೆಯಾಗಿ; ಈ ಮೂರಲಿ ಪ್ರೀತಿಯೇ
ಪರಮೋನ್ನತವೆಂಬುದ ನೀನರಿ.

Kommentare (0)

Lade Inhalte...

Abonnenten

15
15