ಕನ್ನಡ ಕ್ರಿಶ್ಚಿಯನ್ ಹಾಡು- ಎಲ್ಲಾ ಒಳ್ಳೇದೆ ಆಗುವದು ದೇವ ನಿನ್ನ ಪ್ರೀತಿಸಿದ ನನಗೆ.mp4

ಕನ್ನಡ ಕ್ರಿಶ್ಚಿಯನ್ ಹಾಡು- ಎಲ್ಲಾ ಒಳ್ಳೇದೆ ಆಗುವದು ದೇವ ನಿನ್ನ ಪ್ರೀತಿಸಿದ ನನಗೆ.mp4

Kannada Christian Song- "Everything will be good for me who loves you God".mp4 //1 ಕೊರಿಂಥಿಯರಿಗೆ 1...
7 Minuten
Podcast
Podcaster
INDIAN MOST POPULAR LANGUAGES BY NUMBER(FROM No.1 TO No.12) / ===“Good News for All People”, "Words of Light", and "Songs og Life" // संख्या से सर्वाधिक बोली जाने वाली भाषाओं (१-१२) भारत में - ==="सभी लोगों के लिए अच्छी खबर", "प्रकाश के शब्द", और "जीव...

Beschreibung

vor 9 Jahren

Kannada Christian Song- "Everything will be good for me who loves
you God".mp4 //
1 ಕೊರಿಂಥಿಯರಿಗೆ 15 - ಪುನರುತ್ಥಾನದ ಪ್ರಮಾಣ


1ಪ್ರಿಯ ಸಹೋದರರೇ, ನಾನು ನಿಮಗೆ ಬೋಧಿಸಿದ ಶುಭಸಂದೇಶವನ್ನು ನೆನಪಿಗೆ
ತಂದುಕೊಳ್ಳಿರಿ. ನೀವು ಅದನ್ನು ಸ್ವೀಕರಿಸಿದ್ದೀರಿ. ಅದರಲ್ಲಿ ನೆಲೆಯಾಗಿ
ನಿಂತಿದ್ದೀರಿ. 
2ನಾನು ನಿಮಗೆ ಶುಭಸಂದೇಶವೆಂದು ತಿಳಿಸಿದ ಸಂಗತಿಯನ್ನು ದೃಢವಾಗಿ
ವಿಶ್ವಾಸಿಸಿದರೆ ನೀವು ಜೀವೋದ್ಧಾರವನ್ನು ಪಡೆಯುವಿರಿ. ಇಲ್ಲವಾದರೆ ನಿಮ್ಮ
ವಿಶ್ವಾಸ ನಿರರ್ಥಕವಾದೀತು.


3ನಾನು ಪಡೆದುಕೊಂಡದ್ದನ್ನು ಮುಖ್ಯವಾದುದು ಎಂದೆಣಿಸಿ ನಿಮಗೆ ಒಪ್ಪಿಸಿದ್ದೇನೆ.
ಅದು ಯಾವುದೆಂದರೆ, ಪವಿತ್ರಗ್ರಂಥದಲ್ಲಿ ಹೇಳಿರುವ ಪ್ರಕಾರ ಕ್ರಿಸ್ತಯೇಸು ನಮ್ಮ
ಪಾಪಗಳ ಪರಿಹಾರಕ್ಕಾಗಿ ಪ್ರಾಣತ್ಯಾಗ ಮಾಡಿದರು. 
4ಅವರನ್ನು ಭೂಸ್ಥಾಪನೆ ಮಾಡಲಾಯಿತು. ಅದೇ ಗ್ರಂಥದ ಪ್ರಕಾರ ಮೂರನೆಯ ದಿನ ಅವರು
ಪುನರುತ್ಥಾನ ಹೊಂದಿದರು. 
5ಅನಂತರ ಕೇಫನಿಗೂ ಹನ್ನೆರಡು ಮಂದಿಗೂ ಕಾಣಿಸಿಕೊಂಡರು. 
6ತರುವಾಯ ಒಂದೇ ಸಮಯದಲ್ಲಿ ಐನೂರಕ್ಕೂ ಹೆಚ್ಚಿನ ಮಂದಿ ಸಹೋದರರಿಗೆ
ಪ್ರತ್ಯಕ್ಷರಾದರು. ಅವರಲ್ಲಿ ಕೆಲವರು ಸತ್ತುಹೋಗಿದ್ದರೂ ಬಹುಮಂದಿ ಇಂದಿಗೂ
ಬದುಕಿದ್ದಾರೆ. 
7ಅದಾದ ಮೇಲೆ ಯಕೋಬನಿಗೂ ಅನಂತರ ಪ್ರೇಷಿತರೆಲ್ಲರಿಗೂ
ಕಾಣಿಸಿಕೊಂಡರು. 
8ಕಟ್ಟಕಡೆಗೆ ದಿನತುಂಬುವ ಮೊದಲೇ ಹುಟ್ಟಿದವನಂತಿರುವ ನನಗೂ
ಕಾಣಿಸಿಕೊಂಡರು. 
9ನಾನಾದರೋ ಪ್ರೇಷಿತರಲ್ಲಿ ಕನಿಷ್ಠನು, ಪ್ರೇಷಿತನೆಂಬ ಹೆಸರಿಗೂ ಅಪಾತ್ರನು.
ಏಕೆಂದರೆ, ನಾನು ದೇವರ ಸಭೆಯನ್ನು ಹಿಂಸಿಸಿದೆನು. 
10ನಾನು ಈಗ ಈ ಸ್ಥಿತಿಯಲ್ಲಿ ಇರುವುದು ದೇವರ ಅನುಗ್ರಹದಿಂದಲೇ. ಅವರ ಅನುಗ್ರಹ
ನನ್ನಲ್ಲಿ ವ್ಯರ್ಥವಾಗಲಿಲ್ಲ. ನಾನು ಅವರೆಲ್ಲರಿಗಿಂತಲೂ ಹೆಚ್ಚು ಶ್ರಮಪಟ್ಟು
ಸೇವೆಮಾಡಿದ್ದೇನೆ. ಅದನ್ನು ಮಾಡಿದವನು ನಾನಲ್ಲ, ನನ್ನಲ್ಲಿರುವ ದೇವರ
ಅನುಗ್ರಹವೇ. 
11ನಾನಾದರೇನು, ಅವರಾದರೇನು? ನಾವು ಸಾರುವ ಸಂದೇಶ ಒಂದೇ ಅದನ್ನು ನೀವು
ನಂಬಿದ್ದೀರಿ.



Kommentare (0)

Lade Inhalte...

Abonnenten

15
15